ಕೆ.ಜಿ.ಯಫ್ 2 ಚಿತ್ರದೊಂದಿಗೆ ಬಿಡುಗಡೆ ಆಗಲಿದೆ ಈ ಎರೆಡು ಸಿನಿಮಾ ಟೀಸರ್ಗಳು!!

ಯವುದಾದರು ಒಂದು ಸಿನಿಮಾ ಅಥವಾ ಹೆಸರಾಂತ ನಟನ ಸಿನಿಮಾ ಬಾರಿ ಹೆಸರು ಮಾಡಿ, ಅಭಿಮಾಣಿಗಳೆಲ್ಲ ಸಿನಿಮಾ ಬಿಡುಗಡೆಗೆಂದೇ ಕಾಯುತ್ತಿರುವಂತ ಒಂದು ಬಹುನಿರೀಕ್ಷಿತ ಹಾಗೂ ದೊಡ್ಡ ಸಿನಿಮಾ ಬಿಡುಗದೇ ಆಗುವಾಗ ಮೇತೊಂದು ಮುಂನೆಂಬರು ಸಿನಿಮಾದ ಟ್ರೈಲರ್ ಅಥವಾ ಟೀಸರ್ ಅಥವಾ ಸಿನಿಮಾ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವ ಟ್ರೆಂಡ್ ಈಗಿನದಲ್ಲ.

ಎಲ್ಲೆಲ್ಲೂ ಕೆ.ಜಿ.ಯಫ್ ದೇ ಧ್ಯಾನ ಆಗುರುವ ಇಂದು ಕಡೆಗೂ ಸಿನಿಮಾ ಬಿಡುಗಡೆಯ ದಿನ ಬಂದಿದೆ. ಈಗಾಗಲೇ ಬಾರಿ ಹೆಸರು ಮಾಡಿರುವ ಈ ಸಿನಿಮಾ ಬಿಡುಗಡೆ ಗು ಮುನ್ನವೇ ಬೆಜ್ಜಾನ್ ಸದ್ದು ಮಾಡಿತ್ತು. ಈ ಸಿನಿಮಾ ಬಿಡುಗಡೆಯೊಂದಿಗೆ ಮುಂಬರುವ ಸಿನಿಮಾದ ಟೀಸರ್ ಗಳನ್ನು ಬಿಡುಗಡೆ ಮಾಡಲಿರುವ ಸಂಭ್ರಬದ ವಿಚಾರವನ್ನು ಹಂಚಿಕೊಂಡಿದೆ “ಹೊಂಬಾಕೆ ಫಿಲ್ಮ್ಸ್” ನ ವತಿಯವರು.

ಅದುವು ಒಂದಲ್ಲ. ಎರಡು ಮುಂಬರುವ ಸಿನಿಮಾದ ಟೀಸರ್ಗಳನ್ನು ಕೆ.ಜಿ.ಯಫ್ 2 ಸಿನಿಮದೊಂದಿಗೆ ಜೋಡಿಸಿ ಬಿಡುಗಡೆ ಮಾಡಲಾಗುತ್ತಿದೆ. ಇಂದು ಏ.14ಕ್ಕೆ ಕೆ.ನಿ.ಯಫ್ 2 ಸಿನಿಮಾ ತೆರೆ ಕಾಣಲಿದ್ದು, ‘ರಿಷಬ್ ಶೆಟ್ಟಿ’ ಅಭಿನಯದ “ಕಾಂತಾರ”, ಹಾಗೂ ‘ಸಂತೋಷ ಆನಂದ್ ರಾಮ್’ ಅಭಿನಯದ “ರಾಘವೇಂದ್ರ ಸ್ಟೋರ್ಸ್” ಸಿನಿಮಾಗಳ ಟೀರ್ಸರ್ ಗಳನ್ನು ಇಂದು ಹೊಂಬಾಳೆ ಫಿಲ್ಮ್ಸ್ ನ ಅಡಿಯಲ್ಲಿ ಕಾಣಬಹುದು.

ಇನ್ನು ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಖ್ಯಾತ ನವರಸ ನಾಯಕ ಜಗ್ಗೇಶ್ ಅವರು ಕವಿಶೇಷ ಹಾಗೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ಈ ಎರೆಡು ಸಿನಿಮಾಗಳ ಟೀಸರ್ ಅನ್ನು ಇಂದು ಬಿಡುಗಡೆ ಆಗಿರುವ ಕೆ.ಜಿ.ಯಫ್ 2 ಚಿತ್ರದೊಂದಿಗೆ ಬಿಡುಗಡೆ ಮಾಡಲಿದ್ದು, ಚಿತ್ರ ತಂಡ ಹಾಗೂ ಅಭಿಮಾನಿಗಳು ಚಿತ್ರಕ್ಕೆ ಶುಭ ಕೋರಿದ್ದಾರೆ.