ಕನ್ನಡದ ಖ್ಯಾತ ಜೆಮ್ಸ್ ಚಿತ್ರ ಅಪ್ಪುವಿನ ಧ್ವನಿಯಲ್ಲಿ ಮರುಬಿಡುಗಡೆಗೆ ತಯಾರಿ!!

ಕರ್ನಾಟಕದ ಮುತ್ತು ರತ್ನ ಆಗಿದ್ದ ಡಾ.ಪುನಿತ್ ರಾಜ್ ಕುಮಾರ್ ಅವರ ಮರಣ ಇನ್ನು ಎಷ್ಟೋ ಅಭಿಮಾನಿಗಳಿಗೆ ಹಾಗೂ ಜನರಿಗೆ ಸಹಿಸಲಾಗದ ನೋವನ್ನುಟುಮಾಡಿದೆ. ಅಪ್ಪು ನಟನೆಯ ಕೊನೆಯ ಚುತ್ರ “ಜೆಮ್ಸ್” ಪೂರ್ಣಗೊಳ್ಳೋವಸ್ಟರಲ್ಲೇ, ಬಿಡುಗಡೆ ಆಗುವ ಮುನ್ನವೇ ಅಪ್ಪು ನಮ್ಮೆಲ್ಲರನ್ನು ಬಿಟ್ಟು ಅಗಲಿದರು. ಹಾಗಾಗಿ ಅಪ್ಪು ಕೊನೆಯ ಚಿತ್ರಕ್ಕೆ ಸಹಿದರ ಶಿವ್ವನ ಅವರಿಂದ ವಾಯ್ಸ್ ಡಬ್ಬಿಂಗ್ ಮಾಡಲಾಗುತ್ತು.

ಈ ಚಿತ್ರ ಅಪ್ಪು ಅವರ ಹುಟ್ಟು ಹಬ್ಬ, ಅಂದರೆ ಇದೆ ಮಾರ್ಚ್ 17ಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಹಾಗೂ ಹೊರದೇಶಗಳ್ಳಲು ಬಿಡುಗಡೆ ಆಗಿತ್ತು. ಬರೀ ಸಾಂಡಲ್ವುಡ್ ಮಾತ್ರವಲ್ಲದೆ, ಇಡೀ ಕರುನಾದೆ ಕಂಡಿದ್ದ ಕನಸು ಈ ಚಿತ್ರದ ಮೂಲಕ ಪೂರಕವಾಗಿದೆ. ಇಲ್ಲಿಯ ವರೆಗೂ ಎಂದು ಯಾವ ಸಿನಿಮಾವು ತಂದಿರದ 100ರು. ಕೋಟಿ ಕ್ಲಬ್‌ ಅಪ್ಪು ಅವರ ಕೊನೆಯ ಸಿನಿಮಾ ಸೇರಿದೆ.

ಜೆಮ್ಸ್ ಇನ್ನು 61 ಥಿಯೇಟರ್‌ಗಳಲ್ಲಿ ದಿನಕ್ಕೆ 2 ರಿಂದ 3 ಶೋಗಳು ಪ್ರದರ್ಶನವಾಗುತ್ತಿದೆ. ಅಭಿಮಾನಿಗಳು ಇನ್ನು ಚಿತ್ರವನ್ನು ಮುಗಿಬಿದ್ದು ತೆರೆಮೇಲೇ ನೋಡಲು ಬಯಸುತ್ತಾರೆ. ಇಂತಹ ಅಭಿಮಾನಿಗಳಿಗೆ ಒಂದು ಒಳ್ಳೆ ಶುಭ ಸಮಾಚಾರ ಕೊಟ್ಟಿದೆ ಜೆಮ್ಸ್ ಚಿತ್ರ ತಂಡ. ಜೆಮ್ಸ್ ಚಿತ್ರದ್ಲಲಿ ಔನಿತ್ ಅವರ ಪಾತ್ರಕ್ಕೆ , ಸ್ವತಃ ಪುನಿತ್ ಅವರದ್ದೇ ಧ್ವನಿಯಲ್ಲಿ ಸಿನಿಮಾ ಮತ್ತೆ ಬಿಡುಗಡೆ ಮಾಡಲಿದ್ದಾರೆ ನಿರ್ಮಾಪಕ ಕಿಶೋರ್‌ ಹಾಗೂ ಚಿತ್ರತಂಡ.

ಹೈದರಾಬಾದ್‌ನ ಖ್ಯಾತ ಸೌಂಡ್‌ ಇಂಜಿನಿಯರ್‌ “ಶ್ರೀನಿವಾಸ ರಾವ್‌” ಅವರ ತಂಡದಿಂದ ಕೊನೆಗೂ ‘ಜೇಮ್ಸ್‌’ ಚಿತ್ರದಲ್ಲಿ ಪುನೀತ್‌ ಅವರ ಧ್ವನಿಯನ್ನು ರೀ ಕ್ರಿಯೇಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆಯೇ ಅಪ್ಪು ಅವರ ಧ್ವನಿಯನ್ನು ರೀ ಕ್ರಿಯೇಟ್‌ ಮಾಡುವುದಕ್ಕೆ ಸಾಕಷ್ಟುಪ್ರಯತ್ನ ಮಾಡಿದ್ದರು, ಆದರೆ ಪ್ರಯತ್ನ ಒಹಳಿಸದ ಕಾರಣ ಶಿವವಣ್ಣ ಅವರ ಧ್ವನಿಯಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತು. ತಾಂತ್ರಿಕದ ಮುಕಾಂತರ 15 ಗಂಟೆಗಳ ಕಾಲ ಒಬ್ಬ ವ್ಯಕ್ತಿಯ ಧ್ವನಿ ಸಿಕ್ಕರೆ ಅದನ್ನು ಇಟ್ಟುಕೊಂಡು ಇಡೀ ಚಿತ್ರದ ಅವರ ಪಾತ್ರಕ್ಕೆ ಆ ಧ್ವನಿಯನ್ನು ಜೋಡಿಸುವ ಕೆಲಸ ಮಾಡುತ್ತಾರೆ. ಇದೆ ನಿಟ್ಟಿನ್ನಲಿ ಅಪ್ಪು ಅವರ ಹಿಂದಿನ ಚಿತ್ರಗಳ ಹಾಗೂ ಕನ್ನಡದ ಕೋಟ್ಯಾಧಿಪತಿಯಲ್ಲಿ ಅವರ ಮಾತನಾಡಿದ್ದು ಸೇರಿಸಿ 15 ಗಂಟೆ ಅವಧಿಯ ಧ್ವನಿಯ ಮೂಲವನ್ನು ಹಿಡಿದು, ಮೂರುವರೆ ತಿಂಗಳು ಕಾಲ ಶ್ರೀನಿವಾಸ್‌ ರಾವ್‌ ಅವರ 16 ಮಂದಿ ತಂಡ ಸೇರಿ ಕೆಲಸ ಮಾಡಿದ್ದರು ಹಾಗೂ ಯಶಸ್ವಿ ಆಗಿದ್ದಾರೆ. “ಏ.22” ರಿಂದ ಅಪ್ಪು ಅವರ ಧ್ವನಿಯಲ್ಲೇ ಜೇಮ್ಸ್‌ ಚಿತ್ರವನ್ನು ನೋಡಬಹುದು ಎಂದಿದ್ದಾರೆ ನಿರ್ದೇಶಕ ಚೇತನ್‌ ಕುಮಾರ್‌.